1ನೇ ಬ್ರಿಕ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಮೊದಲನೆಯ ಶೃಂಗಸಭೆ ಮತ್ತು ಇದು 16 ಜೂನ್ 2009ರಲ್ಲಿ ಯೆಕಟನ್ಬರ್ಗ್‌ನಲ್ಲಿ ನಡೆಯಿತು. ಗೋಲ್ಡ್‌ಮನ್ ಸ್ಯಾಕ್ಸ್‌ನ 2050ರ ವೇಳೆಗೆ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನ ಪ್ರಮುಖ ಆರ್ಥಿಕತೆಗಳಾಗಿ ಹೊರಹೊಮ್ಮುತ್ತವೆ ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ಸಂಘಟನೆ ರೂಪಗೊಂಡಿತು. == ಭಾಗವಹಿಸಿದವರು == ನಾಲ್ಕೂ ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. == ಚರ್ಚಾಂಶಗಳು == ಬ್ರಿಕ್ ನಾಯಕರು ಹೆಚ್ಚಿನ ಆರ್ಥಿಕ ಸುದಾರಣೆಗಳನ್ನು- "ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚಿನ ಅಭಿಪ್ರಾಯಗಳನ್ನು ಕೊಡುವ ಹಕ್ಕುಗಳು ಮತ್ತು ಪ್ರಾತಿನಿದ್ಯವನ್ನೂ ಹಾಗೂ ಅವುಗಳ ಅಧಿಪತಿಗಳನ್ನು ಮತ್ತು ಹಿರಿಯ ನಾಯಕತ್ವವನ್ನು ನಿಯಮಿಸುವಾಗ ಹೆಚ್ಚಿನ ಮುಕ್ತತೆ, ಪಾರದರ್ಶಕತ್ವ ಮತ್ತು ಯೋಗ್ಯತೆಯನ್ನು ಆಧಾರಿವಾಗಿಸಿ ಕೊಳ್ಳ ಬೇಕು" ಎಂಬ ಬೇಡಿಕೆಗಳನ್ನು ಇಟ್ಟರು. ಸಂಯುಕ್ತ ರಾಷ್ಟ್ರ ಸಂಸ್ಥೆಯ ಸುಧಾರಣೆಗಳ ಬಗೆಗೆ ನಾಯಕರು ಚರ್ಚಿಸಿದರು. "ನಾವು ಅಂತರರಾಷ್ಟ್ರೀಯ ವಿಚಾರಗಳಲ್ಲಿ ಭಾರತ ಮತ್ತು ಬ್ರೆಜಿಲ್‌ಗಳ ಪ್ರಾಮುಖ್ಯತೆಯ ಬಗೆಗೆ ಒತ್ತಿ ಹೇಳುತ್ತೇವೆ ಮತ್ತು ಅವು ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಆಸಕ್ತಿಯನ್ನು ಅರ್ಥ ಮಾಡಿಕೊಂಡು ಬೆಂಬಲಿಸುತ್ತೇವೆ" ಎಂದು ಈ ರಾಷ್ಟ್ರಗಳು ಹೇಳಿವೆ. 2007-2008ರ ಜಾಗತಿ ಆಹಾರ ಬೆಲೆಗಳ ಬಿಕ್ಕಟ್ಟು (ಜಾಗತಿಕ ಆಹಾರ ಬೆಲೆಗಳು 2007ರಲ್ಲಿ ಮತ್ತು 2008ರ ಮೊದಲ ಮತ್ತು ಎರಡನೆಯ ಕಾಲು ಭಾಗದಲ್ಲಿ ತೀವ್ರವಾಗಿ ಹೆಚ್ಚಾಗಿ ರಾಜಕೀಯ ಆರ್ಥಿಕ ಅಸ್ಥಿರತೆಗೆ ಕಾರಣವಾದವು) ಬಗೆಗಿನ ಹೇಳಿಕೆಯಲ್ಲಿ ಬ್ರಿಕ್ ರಾಷ್ಟ್ರಗಳು "ಎಲ್ಲಾ ಸರಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಕ್ರಿಯಾಶೀಲವಾಗ ಬೇಕೆಂತಲೂ" ಮತ್ತು "ಈ ಸಮಸ್ಯೆಯಿಂದ ಹೊರಬರಲು ತನ್ನ ಕೊಡುಗೆಯ ಕೊಡುವ ಮೂಲಕ ಬದ್ಧತೆ ತೋರುತ್ತೇವೆ" ಎಂದು ಹೇಳಿದವು. == ಉಲ್ಲೇಖ == ಆಧಾರ 1st 2016-10-17 (ಉಲ್ಲೇಖಗಳು ಅಲ್ಲಿಯವೇ)